Mano Charchae with RJ Padma Priya – Mental Health and Physical Health are Equally Important and Support Each Other

IMG_20180110_144346

ಮಾನಸಿಕ ಆರೋಗ್ಯಕ್ಕೆ ನಮ್ಮ ಆರೋಗ್ಯದ ನಿಲುವು

ರೇಡಿಯೊ ಆಕ್ಟೀವ್ನ CR 90.4 MHz ಇವತ್ತಿನ ಮನೋ ಚಚರ್ೇ ಕಾರ್ಯಕ್ರಮದಲ್ಲಿ ಆರ್.ಜೆ . ಪದ್ಮಪ್ರಿಯ ಮತ್ತು ಡಾ, ಪ್ರಸಾದ್ರವರು (ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮನ:ಶಾಸ್ತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ). ನಮ್ಮ ಮಾನಸಿಕ ಆರೋಗ್ಯದ ಮಾನಸಿಕ ನಿಲುವಿನ ಬಗ್ಗೆ ಕುರಿತು ಸಲಹೆಗಳನ್ನು ನೀಡಿದ್ದಾರೆ.
1. ನಮ್ಮ ಬಗ್ಗೆ ತಿಳಿದುಕೊಳ್ಳುವುದು
2. ಕುಟುಂಬದ ಬಗ್ಗೆ ತಿಳಿದುಕೊಳ್ಳುವುದು
3. ಉದ್ಯೋಗದ ಬಗ್ಗೆ ತಿಳಿದುಕೊಳ್ಳುವುದು
4. ಇತರರ ಬಗ್ಗೆ ತಿಳಿದುಕೊಳ್ಳುವುದು
5. ಜೀವನದ ಬಗ್ಗೆ ತಿಳಿದುಕೊಳ್ಳುವುದು
ನಮ್ಮ ಬಗ್ಗೆ ತಿಳಿದುಕೊಳ್ಳುವುದು – ಸಮಾಜದಲ್ಲಿ ಬೇರೆ ಬೇರೆ ರೀತಿಯ ಜನರಿದ್ದಾರೆ. ಪರತಿಯೊಬ್ಬರದ್ದು ಆಲೋಚನೆಗಳು ತುಂಬಾ ವ್ಯತ್ಯಾಸಗಳಿರುತ್ತದ್ದೆ. ಕೆಲಜನರಲ್ಲಿ ಆಶಾಭಾವನೆ ಇರುತ್ತದೆ ಅವರು ಯಾವಾಗಲು ಒಳ್ಳೆಯ ವಿಷಯದ ಬಗ್ಗೆ ಆಲೋಚಿಸುತ್ತಾರೆ ಹಾಗೂ ಒಳ್ಳೆಯ ಮನಸ್ಸನ್ನು ಹೊಂದಿರುತ್ತಾರೆ. ಆದರೆ ಇನ್ನು ಕೆಲಜನರಲ್ಲಿ ಆತ್ಮ ವಿಶ್ವಾಸ ಇರುತ್ತದೆ. ಆದರೆ ಅವರಲ್ಲಿ ಕಲಿಕೆಯ ಸಾಮಥ್ರ್ಯ ಇಲ್ಲದಿದ್ದರೂ ಇದೆ ಎಂದು ತೋರಿಸಿಕೊಳ್ಳುತ್ತಾರೆ. ಕೆಲವರಿಗೆ ನಾನು ತುಂಬ ದಪ್ಪವಾಗಿದ್ದೇನೆ ನನ್ನನ್ನು ತುಂಬಾ ಗೇಲಿಮಾಡುತ್ತಾರೆ ಎಂಬ ಚಿಂತೆ ಇನ್ನು ಕೆಲವರಿಗೆ ನಾನು ಸೌಂದರ್ಯವಾಗಿಲ್ಲವೆಂಬ ಚಿಂತೆಯಲ್ಲಿರುತ್ತಾರೆ. ಇನ್ನು ಕೆಲವರು ನಾನು ಸಣ್ಣವಾಗಿದ್ದೀನಿ ನನ್ನನ್ನು ಕಡ್ಡಿ-ಪೆನ್ಸಿಲ್ ಎಂದು ಗೇಲಿಮಾಡುತ್ತಾರೆ. ಇದು ಅವರ ಮನಸ್ಸಿನ ಮೇಲೆ ಘಾಡವಾದ ಪರಿಣಾಮ ಬೀರುತ್ತದೆ. ಆದ್ದರಿಂದ ನಾವು ಮಾಡುವ ಕೆಲಸದಲ್ಲಿ ತೃಪ್ತಿ ಪಡಬೇಕು. ನಮ್ಮ ಮನಸ್ಸಿನಲ್ಲಿ ಯಾವುದೇರೀತಿಯ ಗೊಂದಲವಿರಬಾರದು. ಇದರಿಂದ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ. ಆದರೆ ನಮ್ಮನ್ನ ನಾವು ಒಪ್ಪಿಕೊಳ್ಳಬೇಕು, ಇತರರ ಸಲುವಾಗಿ ಯೋಚಿಸಬಾರದು. ಇದು ಬಹಳಮುಖ್ಯ.

 
ಕುಟುಂಬದ ಬಗ್ಗೆ-ಮನುಷ್ಯರು ಹುಟ್ಟುವಾಗ ಯಾವುದೇ ಜಾತಿ, ಸಮಾಜ, ವರ್ಗದಲ್ಲಿ ಹುಟ್ಟಬೇಕೆಂದು ಅಂದುಕೊಂಡಿರುವುದಿಲ್ಲ. ನಾವು ಯಾವ ಸಮುದಾಯದಲ್ಲಿ ಹುಟ್ಟಿರಿತ್ತೇವೆಯೋ ಅದಕ್ಕೆ ಹೊಂದಿಕೊಂಡಿರಬೇಕು. ನಮ್ಮ ಕುಟುಂಬದ ಬಗ್ಗೆ ಗೌರವವಿರಬೇಕು. ನಾವು ಆಡುವ ಭಾಷೆಯಲ್ಲಿ ಪ್ರೀತಿಯಿರಬೇಕು. ನಾವು ಯಾವುದೇ ಒಂದು ಕೆಲಸ ಮಡಬೇಕಾದರೆ ಕುಟುಂಬದ ಸಹಕಾರ ಉತ್ತಮವಾಗಿರಬೇಕು . ಕುಟುಂಬದ ಬಗ್ಗೆ ಕೀಳರಿಮೆ ಬಂದರೆ ಮಾನಸಿಕ ಹಾಗು ದೈಹಿಕವಾಗಿ ತೊಂದರೆಗೊಳಗಾಗುತ್ತಾರೆ.

 
ಉದ್ಯೋಗದ ಬಗೆ ್ಗ- ಆಗಿನ ಕಾಲದಲ್ಲಿ ಉದ್ಯೋಗಂ ಪುರುಷ ಲಕ್ಷಣಂ ಎಂದು ಹೇಳುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ಪುರುಷ ಮಹಿಳೆಯರಿಬ್ಬರು ಜೀವನ ನಡೆಸಲು ಉದ್ಯೋಗ ಮಾಡುತ್ತಾರೆ. ನಾವು ಯಾವುದೇ ಕೆಲಸ ಮಾಡಿದರು ಅದರಲ್ಲಿ ಆತ್ಮವಿಶ್ವಾಸ ಮತ್ತು ತೃಪ್ತಿಯಿರಬೇಕು. ಮಾಡುವ ಕೆಲಸದಲ್ಲಿ ಪ್ರೀತಿ. ವಿಶ್ವಾಸ. ಅಭಿಮಾನ. ಇರಬೇಕು. ನಾವು ಮಾಡುವ ಕೆಲಸ ಮನಸ್ಸನ್ನು ಕಲಕುವಂತಿರಬಾರದು. ಅಪರಿಚಿತರು ಹೀಯಾಳಿಸುವರೆಂದು ನಾವು ಸಾದನೆಯ ದಾರಿಯನ್ನು ಮರೆತು ಕೂರಬಾರದು. ನಾವು ನಮ್ಮ ಜ್ಞಾನ ಕೌಶಲ್ಯವನ್ನು ವೃದ್ದಿಸಿಕೊಂಡು ಯಶಸ್ಸಿನ ಮಾರ್ಗವನ್ನು ಕಾಣಬೇಕು. ಬೇಸರ ಮಾಡಿಕೊಳ್ಳುವುದು, ಸಾಮಥ್ರ್ಯಕ್ಕೆ ತಕ್ಕಹಾಗೆ ಕೆಲಸ ಸಿಕ್ಕಿಲ್ಲ ಅಂತ ಬೇಸರ ಮಾಡಿಕೊಂಡು ಕೂರುವುದು ತಪ್ಪು, ಕೆಲಸದಲ್ಲಿ ಪ್ರೀತಿ, ವಿಶ್ವಾಸ, ಅಭಿಮಾನ, ಇರಬೇಕು.

 
ಇತರರ ಬಗ್ಗೆ- ಪ್ರತೀ ವ್ಯಕ್ತಿಗೂ ಅಂತಸ್ತು , ವರ್ಗ,ಜಾತಿ, ಹಣವನ್ನು ನೋಡುತ್ತಾರೆ. ಅವನಲ್ಲಿ ಗುಣವಿದ್ದರೂ ತಿರಸ್ಕರಿಸುವುದು ಅಗೌರವಿಸುವುದು ತಪ್ಪು. ಪ್ರತಿಯೊಬ್ಬರಿಗೂ ಅವರದ್ದೇ ಆದ ಗೌರವವಿರುತ್ತದೆ ಅವರ ವ್ಯಕ್ತಿತ್ವದ ಗುಣ ಅವನಂತೆಯೇ ಇರುತ್ತದೆ. ನಮ್ಮಲ್ಲಿ ಕೀಳರಿಮೆ ಇರಬಾರದು. ವ್ಯಕ್ತಿಯನ್ನು ಅಧಿಕಾರದಿಂದ ಸ್ನೇಹ ಮಾಡಬಾರದು ಯಾರೊಬ್ಬರನ್ನು ಅಧಿಕಾರ, ಹಣದಿಂದ ನೋಡಬಾರದು, ಪ್ರೀತಿ ವಿಶ್ವಾಸದಿಂದ ನೋಡಬೇಕು. ಚಿಂತೆಯಿಂದ ಮಾನಸಿಕವಾಗಿ ಆರೋಗ್ಯ ಹಾಳುಮಾಡಿಕೊಳ್ಳುತ್ತಾರೆ. ಇದನ್ನು ಬಿಟ್ಟು ಸಕಾರಾತ್ಮಕವಾಗಿ ಯೋಚಿಸೋಣ ನಾವು ನಮ್ಮನ್ನು ಮೆಚ್ಚಿಸೋಹಾಗೆ ಕೆಲಸ ಮಾಡಬೇಕು.ಹಣ ,ಅಂತಸ್ತು, ಅಧಿಕಾರವನ್ನು ಬಿಟ್ಟು ಪ್ರೀತಿ ವಿಶ್ವಾಸದಿಂದ ನೋಡಬೇಕು.

 
ಜೀವನದ ಬಗ್ಗೆ- ಮನುಷ್ಯನ ಜೇವನದಲ್ಲಿ ಕಷ್ಟ-ಸುಖ; ನೋವು-ನಲಿವು; ಇದ್ದೇ ಇರುತ್ತದೆ. ಮನುಷ್ಯನಿಗೆ ವಯಸ್ಸಾದ ಮೇಲೆ ಕಾಯಿಲೆಗಳು ಸಾಮಾನ್ಯವಾಗಿ ಬಂದೇ ಬರುತ್ತವೆ. ಚಿಂತೆಯಿಂದಾಗಿ ಮಾನಸಿಕವಾಗಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ. ಇದರಿಂದ ಜೀವನದಲ್ಲಿ ಜಿಗುಪ್ಸೆ ಮೂಡಿ ಬರುತ್ತದೆ. ಯಾರಿಗಾಗಿ ಬದುಕಬೇಕು ಎಂದು ಮಾನಸಿಕವಾಗಿ ಚಿಂತೆಗೊಳಗಾಗುತ್ತಾರೆ. ನಾವು ಎಷ್ಟು ಆತ್ಮ ವಿಶ್ವಾಸದಿಂದಿರುತ್ತೇವೆಯೋ ಅಷ್ಟು ನಮ್ಮ ಆರೋಗ್ಯ ವೃದ್ದಿಯಾಗುತ್ತದೆ. ಪ್ರಕೃತಿಯಲ್ಲಿ ಸಿಗುವ ಖುಷಿಯನ್ನು ಅನುಭವಿಸಬೇಕು. ಜೀವನದಬಗ್ಗೆ ಸಕಾರಾತ್ಮಕವಾಗಿ ಯೋಚಿಸಬೇಕು. ಕಾಯಿಲೆ ಬಂದರೆ ವೈದ್ಯರ ಸಲಹೆಗಳಿರುವುದರಿಂದ ನೀವು ಮಾನಸಿಕವಾಗಿ ಚಿಂತಿಸುವುದರಲ್ಲಿ ಅರ್ಥವಿಲ್ಲ.ಯಾವುದೇ ದೈಹಿಕ ಕಾಯಿಲೆಯಿಂದ ಮಾನಸಿಕ ಕಾಯಿಲೆಗೆ ತುತ್ತಾಗಬಾರದು.

 
ಡಾ,ಪ್ರಸಾದ್ ರವರ ಕಿವಿಮಾತು: ಮನುಶ್ಯ ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯ ಇದ್ದರೆ ಮಾತ್ರ ಜೀವನದಲ್ಲಿಗೆಲುವು ಸಿಗೋದು. ಆದರೆ ಹೀಗೆ ಆಗಬೇಕು ಅಂದ್ರೆ ಸಂಘಜೀವಿಯಾಗಿ ಬದುಕಬೇಕು. ಬದುಕಲ್ಲಿ ಕಷ್ಟನೋ, ಸುಖನೋ ಗೆಲುವು ಸಾದಿಸಬೇಕು, ಎಲ್ಲದರ ಬಗ್ಗೆಯೂ ಸಕಾರಾತ್ಮಕವಾಗಿ ಯೋಚನೆ ಮಾಡಬೇಕು.
ಇನ್ನು ಈ ವಿಷಯಾದ ಬಗ್ಗೆ ಹೆಚ್ಚಿನ ಮಾಹಿತಿಗೆ ಕಳಗಿನ clink link:

 

ಪ್ರೀತಿಈಡಿಗ.

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s