Radio Active COVID-19 with Nagasimha: An Awareness Session for the Children of Chagalatti

ಕರೋನ ಕಾರಣಕ್ಕಾಗಿ ಮಕ್ಕಳಿಗೆ ಸರ್ಕಾರ ಸುಮಾರು ಎರಡು ತಿಂಗಳ ರಜ ನೀಡಿದೆ , ಈ ರಜ ಪೋಷಕರಿಗೂ ಸಿಕ್ಕಿದೆ . ಕೆಲವು ಮಕ್ಕಳಿಗೆ ಪರೀಕ್ಷಗೆಳು ಮುಗಿದಿದ್ದೆರೆ ಇನ್ನು ಕೆಲವು ಮಕ್ಕಳು ಪರೀಕ್ಷೆ ಮುಗಿಯದ ಆತಂಕದಲ್ಲಿ ಇದ್ದಾರೆ . ಕರೋನ ಸೋಂಕಿನ ಕಾರಣ ಯಾರೂ ಮನೆಯಿಂದ ಹೊರ ಬರುವಂತಿಲ್ಲ , ಮನೆಯೊಳಗೇ ಇರಬೇಕು . ಆಟ , ಗಲಾಟೆ  ಇಲ್ಲದೆ ಮಕ್ಕಳು ಇರ ಬಲ್ಲರೆ ? ಪೋಷಕರಿಗಿದು ದೊಡ್ಡ ಸವಾಲು . 


ನನ್ನ ಹಳ್ಳಿ ಪೋಷಕರು ಏನು ಮಾಡಿದ್ರು ಅಂದ್ರೆ ಅವರ ಮಕ್ಕಳನ್ನು ನಮ್ಮ ಮಕ್ಕಳ ಗ್ರಂಥಾಲಯಕ್ಕೆ ಕಳಿಸಿ ಆಟ ಆಡಿಕೊಂಡು ಬರೋಕೆ ಹೇಳಿದ್ರು .. ಗ್ರಂಥಾಲಯಕ್ಕೆ ಬಂದ ಮಕ್ಕಳಿಗೆ ನಾವು ಹೇಳಿದ್ದು ಆಟ ಆಡಿಸುತ್ತೇವೆ ಮೊದಲು ಪುಸ್ತಕ ಓದ ಬೇಕು .. ಅದಕ್ಕೂ ಮುಂಚೆ ಕರೋನ ಬಗ್ಗೆ ತಿಳಿದುಕೋ ಬೇಕು ಅಂತ . ಮಕ್ಕಳು ನಮ್ಮ ಷರತ್ತಿಗೆ ಒಪ್ಪಿಕೊಂಡ್ರು ..  ಮೂರೂ ಮೂರೂ ಮೀಟರ್ ದೊರಕ್ಕೆ ವೃತ್ತ ಬರೆದು ಅದರಲ್ಲಿ ಮಕ್ಕಳನ್ನು ಕೂರಿಸಿ ಕರೋನ ಅಂದರೇನು , ಕೈ ತೊಳೆಯೋದು ಯಾಕೆ , ಮಾಸ್ಕ ಯಾಕೆ ಬೇಕು , ಮನೇನಲ್ಲೇ ಯಾಕೆ ಇರಬೇಕು ಅಂತ ಸುಮಾರು ಎರಡುಗಂಟೆ ಕಾಲ ಪಾಠ ಮಾಡಿ , ಈಗ ಆಟ ಆಡೋಣವ ಅಂದ್ರೆ ಮಕ್ಕಳು ಹೇಳಿದ್ರು ” ಮೊದಲು  ಮನೆಗೆ ಹೋಗಿ ಇಲ್ಲಿ ಕಳಿದನ್ನು ಅಪ್ಪ ಅಮ್ಮನಿಗೇ ಹೇಳ್ತಿವಿ . ಏಪ್ರಿಲ್ ೧೫ ತನಕ ಮನೆಯಿಂದ ಹೊರಕ್ಕೆ ಬರಲ್ಲ ” ಅಂತ ಹೇಳಿದ್ರು . ಸಂತೋಷ ಆಯಿತು . 


ಪೋಷಕರೂ ಕೂಡ ಮಕ್ಕಳ ಜೊತೆ ಈ ಸಂದರ್ಭದಲ್ಲಿ ಮಾತಾಡ ಬೇಕು , ಮಕ್ಕಳ ಮನಸ್ಸಿನಲ್ಲಿ ಇರುವ ಪ್ರಶ್ನೆಗಳಿಗೆ ಉತ್ತರ ನೀಡಬೇಕು . ಕುಟುಂಬ ಗಟ್ಟಿಯಾಗಲು ಇದು ಸಕಾಲ . ಮನೆಯಲ್ಲೇ ಕುಳಿತು ಆಡುವ ಆಟಗಳನ್ನು ಮಕ್ಕಳೊಂದಿಗೆ ಆಡಬೇಕು , ಪುಸ್ತುಕದಿಂದ ಕಥೆ ಓದಿ ಹೇಳಬೇಕು . ತೀರಾ ಶಿಸ್ತು ಮಾಡಲು ಹೋಗುವುದು , ಹಿರಿಯರೆಂಭ ಅಹಂ ತೋರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ . 

Listen in…

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s